ಪರಿಶ್ರಮ ವಾರ್ತೆ ಸುದ್ದಿ: ೧೦೮ ದಿನ ಅನುಷ್ಠಾನ ಜಪಯಜ್ಞ ಪೂಜಾ ಕಾರ್ಯಕ್ರಮ ತುಮಕೂರ ಜೆಲ್ಲೆ ತಿಪಟೂರು ತಾಲೂಕಿನ ನೋಣವಿಕೆರೆ ಶ್ರೀ ಕಾಡಸಿದ್ದೇಶ್ವರ ಮಠದಲ್ಲಿ ಐದನೇ ಸೋಮವಾರಂದು ಶ್ರೀ ಮಠದ ಪೂಜಾ ಕಾರ್ಯಕ್ರಮ ಹಾಗೂ 108 ದಿನ ಅನುಷ್ಠಾನ ಜಪಯಜ್ಞದಲ್ಲಿ ಶ್ರೀ ಮಠದ ಮಠಾಧ್ಯಕ್ಷರಾದ ಶ್ರೀ ಮ ನಿ ಪ್ರ ಶಿವಾನುಭವ ಚರವರ್ಯ ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮಿಗಳು ಹಾಗೂ ಗದಗ ಜೆಲ್ಲೆ ಶಿರಹಟ್ಟ ತಾಲ್ಲೂಕಿನ ಮುಕ್ತಿ ಮಂದಿರ ಧರ್ಮಕ್ಷೇತ್ರದ ಮಠಾಧ್ಯಕ್ಷರಾದ ಶ್ರೀ ಷ ಬ್ರ ವೀಮಲ ರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು ಪಾಲ್ಗೊಂಡಿದ್ದರು ಈ ಸಂದರ್ಭದಲ್ಲಿ ಶಿವಾಚಾರ್ಯ ಸ್ವಾಮಿಗಳು ಹರ ಗುರು ಚರಮೂರ್ತಿಗಳು ಮಠದ ಸಕಲ ಸದ್ಬಕ್ತರು ಹಾಗೂ ಅನೇಕರು ಪಾಲ್ಗೊಂಡಿದ್ದು ಪೂಜ್ಯರ ಆಶೀರ್ವಾದ ಪಡೆದರು

Read more

ಪರಿಶ್ರಮ ವಾರ್ತೆ: PARISHRAM VARTHE ಗದಗ-ಬೆಟಗೇರಿ ನಗರದ ಶ್ರೀ ಜಗದ್ಗುರು ರೇಣುಕಾಚಾರ್ಯ ಸಮುದಾಯ ಭವನದಲ್ಲಿ ಆಷಾಡ ಮಾಸದ ಅಂಗವಾಗಿ ಶ್ರೀ ಮತ್ ಕಾಶೀ ಜಗದ್ಗುರುಗಳವರಿಂದ ಲೋಕ‌ಕಲ್ಯಾಣಾರ್ಥವಾಗಿ ಇಷ್ಟಲಿಂಗ ಪೂಜೆ ಹಾಗೂ ಧರ್ಮ ಸಭೆಯಲ್ಲಿ  ಸಾಮಾಜಿಕ ಧಾರ್ಮಿಕ ಸೇವೆಯನ್ನು ಅತ್ಯಂತ ಶ್ರೇಷ್ಠವಾಗಿ ಸೇವೆಯನ್ನು ಮಾಡುತ್ತಿರುವ ಹಾಗೂ ಮುದ್ರಣ ರಂಗದಲ್ಲಿ ಮುದ್ರಣ ಭಾಸ್ಕರರಾಗಿರುವ ಗದಗ ನಗರದ ಶ್ರೀ ಬಸವರಾಜ ಶಾಬಾದಿಮಠ ಇವರಿಗೆ ಗುಳೆದಗುಡ್ಡದ ಶ್ರೀ ಸದಾಶಿವಯ್ಯನವರು ವಸ್ತ್ರದ ಇವರ ಸ್ಮರಣಾರ್ಥವಾಗಿ ಶ್ರೀ   ಪಂಚಾಚಾರ್ಯ ಕೃಪಾ ಪೋಷಿತ  ಧರ್ಮ ಪ್ರಕಾಶ ಎಂಬ ಪ್ರಶಸ್ತಿಯನ್ನು ಗೀಡಿ ಗೌರವಿಸಲಾಯಿತು. PARISHRAM VARTHE: ಪರಿಶ್ರಮ ವಾರ್ತೆ : ಗದಗ-ಬೆಟಗೇರಿ ನಗರದ ಶ್ರೀ ಜಗದ್ಗುರು ರೇಣುಕಾಚಾರ್ಯ ಸಮುದಾಯ ಭವನದಲ್ಲಿ ಆಷಾಡ ಮಾಸದ ಅಂಗವಾಗಿ ಶ್ರೀ ಮತ್ ಕಾಶೀ ಜಗದ್ಗುರುಗಳವರಿಂದ ಲೋಕ‌ಕಲ್ಯಾಣಾರ್ಥವಾಗಿ ಇಷ್ಟಲಿಂಗ ಪೂಜೆ ಹಾಗೂ ಧರ್ಮ ಸಭೆಯಲ್ಲಿ ತಮ್ಮ ಜೀವನ‌ಪರ್ಯಂತರವಾಗಿ ಶ್ರೀ ಜಗದ್ಗುರು ಪಂಚಾಚಾರ್ಯರ  ಸೇವೆಯನ್ನು ತನ್ನ ಉಸಿರಾಗಿ ಸೇವೆ ಮಾಡುತ್ತಾ ಬಂದಿರುವ ಗದಗ ನಗರದ ಶ್ರೀ ಬೆಟದಯ್ಯ ಹಿರೇಮಠ ಇವರಿಗೆ ಶ್ರೀ ಜಗದ್ಗುರು ಪಂಚಾಚಾರ್ಯ ಸೇವಾ ಧುರಂಧರ ಎಂಬ ಪ್ರಶಸ್ತಿಯನ್ನು   ಶ್ರೀ ಜಗದ್ಗರುಗಳವರು  ನೀಡಿ  ಗೌರವಿಸಿದರು PARISHRAM VARTHE: ಪರಿಶ್ರಮ ವಾರ್ತೆ: ಗದಗ-ಬೆಟಗೇರಿ ನಗರದ ಶ್ರೀ ಜಗದ್ಗುರು ರೇಣುಕಾಚಾರ್ಯ ಸಮುದಾಯ ಭವನದಲ್ಲಿ ಆಷಾಡ ಮಾಸದ ಅಂಗವಾಗಿ ಶ್ರೀ ಮತ್ ಕಾಶೀ ಜಗದ್ಗುರುಗಳವರಿಂದ ಲೋಕ‌ಕಲ್ಯಾಣಾರ್ಥವಾಗಿ ಇಷ್ಟಲಿಂಗ ಪೂಜೆ ಹಾಗೂ ಧರ್ಮ ಸಭೆಯಲ್ಲಿ ಕಾರ್ಗಿಲ್ ಯುದ್ದದಲ್ಲಿ ಹೋರಾಡಿದ ವೀರ ಯೋಧರಿಗೆ ಶ್ರೀ ಜಗದ್ಗುರುಗಳವರು ಸತ್ಕರಿಸಿ ಆಶಿರ್ವದಿಸಿದರು PARISHRAM VARTHE: ಪರಿಶ್ರಮ ವಾರ್ತೆ: ಗದಗ-ಬೆಟಗೇರಿ ನಗರದ ಶ್ರೀ ಜಗದ್ಗುರು ರೇಣುಕಾಚಾರ್ಯ ಸಮುದಾಯ ಭವನದಲ್ಲಿ ಆಷಾಡ ಮಾಸದ ಅಂಗವಾಗಿ ಶ್ರೀ ಮತ್ ಕಾಶೀ ಜಗದ್ಗುರುಗಳವರಿಂದ ಲೋಕ‌ಕಲ್ಯಾಣಾರ್ಥವಾಗಿ ಇಷ್ಟಲಿಂಗ ಪೂಜೆ ಹಾಗೂ ಧರ್ಮ ಸಭೆಯಲ್ಲಿ ಸಂಗೀತ ಕ್ಷೇತ್ರದಲ್ಲಿ ಶ್ರೇಷ್ಠ ಸಾಧನೆಯನ್ನು ಮಾಡಿ ಮಕ್ಕಳಿಗೆ ಸಂಗೀತವನ್ನು ಭೋದನೆ ಮಾಡುತ್ತಿರುವ ಶ್ರೀ ಪಂಚಾಕ್ಷರಿ ಅಣ್ಣಿಗೇರಿ ಇವರಿಗೆ ಸಿರಗುಪ್ಪದ ಆರ್.ಸರ್ವಂಮಗಳಾ ನಾಗಭೂಷಣ ಸಾ. ಸಿರಗುಪ್ಪಾ ಇವರ ಸಂಕಲ್ಪದ ಮೇರೆಗೆ ವಾದ್ಯವಾಗೀಶ ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು

Read more

ಪರಿಶ್ರಮ ವಾರ್ತೆ: ಗದಗ್ ಮಹಾನಗರದ ಶ್ರೀ ಜಗದ್ಗುರು ರೇಣುಕಾಚಾರ್ಯ ಸಮುದಾಯ ಭವನದಲ್ಲಿ ಆಷಾಢ ಮಾಸದ ನಿಮಿತ್ತವಾಗಿ     ಶ್ರೀ ಕಾಶಿ ಜಗದ್ಗುರುಗಳವರ ಶ್ರೀ ಸಿದ್ಧಾಂತ ಶಿಖಾಮಣಿಯ ಆಧ್ಯಾತ್ಮಿಕ ಆಶೀರ್ವಚನ ಕಾರ್ಯಕ್ರಮವು ಅತ್ಯಂತ ವೈಭವಪೂರ್ಣವಾಗಿ ನೆರವೇರುತ್ತಿದೆ ಇ೦ದಿನ ಸಭೆಯಲ್ಲಿ ನರೇಗಲ್ ಶ್ರೀಗಳವರು ಹಾಗೂ ನವನಗರದ ಕಾಶಿ ಪೀಠದ ಖಾಸಾ ಶಾಖಾ ಮಠದ ರಾಜಶೇಖರ ಶಿವಾಚಾರ್ಯ ಸ್ವಾಮಿಗಳವರು ಧರ್ಮ ಸಂದೇಶವನ್ನು ಕೊಟ್ಟರು

Read more

ಪರಿಶ್ರಮ ವಾರ್ತೆ : ರಾಯಚೂರು ಮಹಾನಗರದಲ್ಲಿ ಆಷಾಢ ಮಾಸದ ನಿಮಿತ್ತವಾಗಿ ಶ್ರೀಮತ್ ಕಾಶೀ ಜಗದ್ಗುರುಗಳ ಸಾಮೂಹಿಕ ಇಷ್ಟಲಿಂಗ ಪೂಜೆ ಹಾಗೂ ಶ್ರೀಸಿದ್ಧಾಂತ ಶಿಖಾಮಣಿಯ ಆಧ್ಯಾತ್ಮಿಕ ಆಶೀರ್ವಚನ ಕಾರ್ಯಕ್ರಮವು ವೈಭವದಿಂದ ನೆರವೇರಿತು. ಮಾಹಿಳಾ ಮಂಡಲದ ಸದಸ್ಯರು ಶ್ರೀರುದ್ರ ಪಠಣ ಮಾಡಿದರು.ಅನೇಕ ಹರಗರು ಚರಮೂರ್ತಿಗಳು ಪಾಲ್ಗೊಂಡಿದ್ದರುರಾಯಚೂರು ಮಹಾನಗರದಲ್ಲಿ ಆಷಾಢ ಮಾಸದ ನಿಮಿತ್ತವಾಗಿ ಶ್ರೀಮತ್ ಕಾಶೀ ಜಗದ್ಗುರುಗಳ ಸಾಮೂಹಿಕ ಇಷ್ಟಲಿಂಗ ಪೂಜೆ ಹಾಗೂ ಶ್ರೀಸಿದ್ಧಾಂತ ಶಿಖಾಮಣಿಯ ಆಧ್ಯಾತ್ಮಿಕ ಆಶೀರ್ವಚನ ಕಾರ್ಯಕ್ರಮವು ವೈಭವದಿಂದ ನೆರವೇರಿತು. ಮಾಹಿಳಾ ಮಂಡಲದ ಸದಸ್ಯರು ಶ್ರೀರುದ್ರ ಪಠಣ ಮಾಡಿದರು.ಅನೇಕ ಹರಗರು ಚರಮೂರ್ತಿಗಳು ಪಾಲ್ಗೊಂಡಿದ್ದರು

Read more

ಪರಿಶ್ರಮ ವಾರ್ತೆ ಸುದ್ದಿ : ಪ್ರವಚನಾಚಾರ್ಯ ಲಿಂ ಕೊಟ್ಟೂರ ಬಸವೇಶ್ವರ ಶಿವಾಚಾರ್ಯ ಸೂಡಿ ಸ್ವಾಮೀಜಿಯವರ ೧೦೦ ನೇ ಪುಣ್ಯಾರಾಧನೆ ಗದಗ ಮಹಾನಗರದಲ್ಲಿ ಲಿಂಗೈಕ್ಯ ಷ ಬ್ರ ಕೊಟ್ಟೂರು ಬಸವೇಶ್ವರ ಶಿವಾಚಾರ್ಯ ಸ್ವಾಮಿಜೀಯವರ ೧೦೦ ನೇ ಪುಣ್ಯಾರಾಧನೆ ಕಾರ್ಯಕ್ರಮ ದಿನಾಂಕ 16.07.2018 ಸೋಮವಾರ ವೀವೇಕಾನಂದ ರಸ್ತೆಯಲ್ಲಿರುವ ಸೂಡಿ ಜುಕ್ತಿ ಹಿರೇಮಠದ ಶಾಖಾ ಮಠವಾದ ಗದುಗಿನ ಶ್ರೀ ಜಗದ್ಗುರು ವಿಶ್ವರಾಧ್ಯ ಮಂದಿರದಲ್ಲಿ ಪ್ರಸ್ತುತ ಮಠಾಧ್ಯಕ್ಷರಾದ ಡಾ: ಷ ಬ್ರ ಕೊಟ್ಟೂರು ಬಸವೇಶ್ವರ ಶಿವಾಚಾರ್ಯ ಸ್ವಾಮಿಗಳ ನೇತೃತ್ವದಲ್ಲಿ ಜರಗುವದು ಇದೇ ಶತಮಾನೋತ್ಸವ ಕಾರ್ಯವನ್ನು ಮುಂದಿನ ನವರಾತ್ರಿ ಸಂದರ್ಭದಲ್ಲಿ ಸೂಡಿ ಜುಕ್ತಿ ಹಿರೇಮಠದಲ್ಲಿ ವಿಶೇಷವಾಗಿ ಆಚರಿಸಲು ಸಕಲ ಸದ್ಬಕ್ತರು ನಿರ್ಧರಿಸಿದ್ದಾರೆ ತಾವೆಲ್ಲರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪೂಜ್ಯ ಗುರುಗಳ ಕೃಪೆಗೆ ಪಾತ್ರರಾಗಬೇಕೆಂದು ಪ್ರಕಟಣೆಯಲ್ಲಿ ಕೋರಿದ್ದಾರೆ

Read more