ಪರಿಶ್ರಮ ವಾರ್ತೆ ಸುದ್ದಿ : ಬಾಗಲಕೋಟ ಜಿಲ್ಲಾ ಬಾದಾಮಿ ತಾಲೂಕಿನ ಹೂಲಗೆರಿ ಶ್ರೀ ಕಾಡಸಿದ್ಧೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಶ್ರೀ ರಂಭಾಪುರಿ ಜಗದ್ಗುರುಗಳವರ ಅಡ್ಡಪಲ್ಲಕ್ಕಿ ಹಾಗೂ ಧರ್ಮ ಸಮಾರಂಭ.

Share this on WhatsApp‌ಧರ್ಮ ಮರೆತರೆ ಅಪಾಯ ತಪ್ಪಿದ್ದಲ್ಲ ‌-ಶ್ರೀ ರ‌ಂಭಾಪುರಿ ಜಗದ್ಗುರುಗಳು ಪರಿಶ್ರಮ ವಾರ್ತೆ ಸುದ್ದಿ: ಬದುಕಿ ‌ಬಾಳುವ ‌ಜನಾಂಗಕ್ಕೆ ‌ಶಾಂತಿ ನೆಮ್ಮದಿಯನ್ನು ‌ತುಂಬಿದ ಮೂಲ ‌ಧರ್ಮ ‌ಸಿದ್ದಾಂತವನ್ನು ಮರೆತರೆ ಅಪಾಯ

Read more

ಕಾಡಸಿದ್ದೇಶ್ವರ ಮಠದ ನೂತನ ಶಿಲಾ ಮಂಟಪ ಉದ್ಘಾಟನೆ

Share this on WhatsAppಪರಿಶ್ರಮ ವಾರ್ತೆ ಸುದ್ದಿ: ತುಮಕೂರ ಜೆಲ್ಲೆ ತಿಪಟೂರು ತಾಲೂಕಿನ ನೋಣವಿನಕೆರೆಯ ಶ್ರೀ ಕಾಡಸಿದ್ದೇಶ್ವರ ಮಠದ ನೂತನ ಶಿಲಾ ಮಂಟಪದ ಉದ್ಘಾಟನಾ ಸಮಾರಂಭವನ್ನು ಬರುವ 2018 ಜುಲೈ 1 ರಿಂದ

Read more

ವಿಶ್ವವಾಣಿ ಕನ್ನಡ ದಿನ ಪತ್ರಿಕೆ.ವಿಜಯ ಕರ್ನಾಟಕ ದಿನ ಪತ್ರಿಕೆ.ಉದಯವಾಣಿ ಕನ್ನಡ ದಿನ ಪತ್ರಿಕೆ.ಪ್ರಜಾವಾಣಿ ಕನ್ನಡ ದಿನ ಪತ್ರಿಕೆ.ವರದಿಗಳು 23.03.2018

Share this on WhatsApp Share this on WhatsApp

Read more

ಎಸ್ ಆರ್ ಎನ್ ಇ ಫೌಂಡೇಶನ್ ನ ಅಧ್ಯಕ್ಷ ಎಸ್ ಆರ್ ನವಲೀ ಹಿರೇಮಠ ಬಿಜೆಪಿಗೆ ಸೇರ್ಪಡೆ

Share this on WhatsApp*ಎಸ್ ಆರ್ ಎನ್ ಇ ಫೌಂಡೇಷನ್ ನ ಅಧ್ಯಕ್ಷ ಎಸ್ ಆರ್ ನವಲೀ ಹಿರೇಮಠ್ ಬಿಜೆಪಿಗೆ ಸೇರ್ಪಡೆ* ಪರಿಶ್ರಮ ವಾರ್ತೆ ಸುದ್ದಿ: ಬೆಂಗಳೂರು ಬಾಗಲಕೋಟೆ ಜಿಲ್ಲೆಯಲ್ಲಿ ಭಾರತೀಯ ಜನತಾ

Read more

ಪರಿಶ್ರಮ ವಾರ್ತೆ ಸುದ್ದಿ: ತುಮಕೂರ ಜೆಲ್ಲೆ ತಿಪಟೂರು ತಾಲೂಕಿನ ನೋಣವಿನಕೆರೆ ಶ್ರೀ ಕಾಡಸಿದ್ದೇಶ್ವರ ನೂತನ ಮಠಕ್ಕೆ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳವರ ಭೇಟಿ.

Share this on WhatsAppತುಮಕೂರು ಜೆಲ್ಲೆ ತಿಪಟೂರು ತಾಲೂಕಿನ ನೋಣವಿನಕೇರೆ ಶ್ರೀ ಕಾಡಸಿದ್ದೇಶ್ವರ ನೂತನ ಮಠಕ್ಕೆ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳವರ ಭೇಟಿ Share this on WhatsApp

Read more

ಪರಿಶ್ರಮ ವಾರ್ತೆ ಸುದ್ದಿ:ಮೌಲ್ಯಗಳ ಸಂರಕ್ಷಣೆಯಲ್ಲಿ ಯುವಶಕ್ತಿ ಜಾಗೃತಗೊಳ್ಳಲಿ : ಶ್ರೀ ರಂಭಾಪುರಿ ಜಗದ್ಗುರುಗಳು ರಂಭಾಪುರಿ ಪೀಠ (ಬಾಳೆಹೊನ್ನೂರು) ಪರಿಶ್ರಮ ವಾರ್ತೆ ಸುದ್ದಿ: ಯುವ ಜನಾಂಗ ಈ ದೇಶದ ಅಮೂಲ್ಯ ಸಂಪತ್ತು. ಯುವ ಜನಾಂಗದಲ್ಲಿ ಧರ್ಮ ಪ್ರಜ್ಞೆ ಮತ್ತು ರಾಷ್ಟ್ರ ಪ್ರಜ್ಞೆ ಬೆಳೆದು ಬರುವ ಅಗತ್ಯವಿದೆ. ಮೌಲ್ಯಗಳ ಸಂರಕ್ಷಣೆಯಲ್ಲಿ ಯುವಶಕ್ತಿ ಜಾಗೃತಗೊಂಡು ಕಾರ್ಯ ನಿರ್ವಹಿಸಿದರೆ ಅದ್ಭುತ ಸಾಧನೆಯನ್ನು ಮಾಡಲು ಸಾಧ್ಯವಾಗುವುದೆಂದು ಶ್ರೀ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು.ಅವರು ಶ್ರೀ ರಂಭಾಪುರಿ ಪೀಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವದ ಅಂಗವಾಗಿ ಜರುಗಿದ ‘ರಾಷ್ಟ್ರದ ಸಂಪತ್ತು ಯುವ ಜನಾಂಗ’ ವಿಚಾರ ವೇದಿಕೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತಿದ್ದರು.ದೇ ಶ ನಮಗೇನು ಕೊಟ್ಟಿದೆ ಎನ್ನುವುದಕ್ಕಿಂತ ನಾವು ದೇಶಕ್ಕಾಗಿ ಏನು ಕೊಟ್ಟಿದ್ದೇವೆ ಅನ್ನುವುದನ್ನು ಸ್ವಲ್ಪ ಆಲೋಚಿಸಬೇಕಾಗಿದೆ. ನಾಡು ನುಡಿಗಳ ಬಗೆಗೆ ದೇಶದ ಬಗೆಗೆ ಪ್ರತಿಯೊಬ್ಬರೂ ಸ್ವಾಭಿಮಾನ ಭಕ್ತಿ ಶೃದ್ಧೆಗಳನ್ನು ಹೊಂದುವವರಾಗಬೇಕು. ಯುವ ಜನಾಂಗಕ್ಕೆ ಆದರ್ಶ ಮೌಲ್ಯಗಳನ್ನು ಬೋಧಿಸಿ ಅವರನ್ನು ಸನ್ಮಾರ್ಗಕ್ಕೆ ಕರೆರೆತಂದಲ್ಲಿ ಎಲ್ಲ ರಂಗಗಳಲ್ಲಿ ಅದ್ಭುತ ಸಾಧನೆ ಮಾಡಲು ಸಾಧ್ಯವಾಗುವುದೆಂದರು. ಸಮಾರಂಭ ಉದ್ಘಾಟಿಸಿದ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಬಡತನದ ಬಾಳುವೆಗೆ ಸೌಕರ್ಯ ಕಲ್ಪಿಸುವುದೇ ನಿಜವಾದ ನಾಗರೀಕತೆಯ ಲಕ್ಷಣ. ಯುವ ಜನಾಂಗದಲ್ಲಿ ಒಂದು ಗುರಿ ಇರಲಿ. ಆ ಗುರಿ ಸಾಧನೆಗೆ ಗುರು ಒಬ್ಬನಿರಬೇಕಾಗುತ್ತದೆ. ದುಷ್ಟ ಚಟಗಳ ದಾಸರಾಗದೇ ಆಚಾರ ವಿಚಾರ ಸಂಪನ್ನರಾಗಲು ಮುಂದಾಗಬೇಕಾಗಿದೆ ಎಂದರು. ಉಪನ್ಯಾಸ ನೀಡಿದ ಉತ್ಸಾಹಿ ಯುವಕ ಬಂಕಾಪುರದ ವಿನಯಕುಮಾರ್ ಆರ್. ಅರಳೆಲೆಮಠ ಮಾತನಾಡಿ ಮನವೆಂಬ ಆಸೆಗೆ ಬುದ್ಧಿಯೇ ಅಂಕುಶ. ಶಕ್ತಿ ಮತ್ತು ನಿರ್ಭಯತೆ ಇವೇ ನನ್ನ ಸಂದೇಶ ಎಂದು ಸಾರಿದ ಸ್ವಾಮಿ ವಿವೇಕಾನಂದರ ಉಕ್ತಿಯನ್ನು ಅನುಸರಿಸಿ ಬಾಳಬೇಕು. ಯುವ ಜನಾಂಗದಲ್ಲಿ ತಾಳ್ಮೆ ಸಹನೆ ಮತ್ತು ದೂರದೃಷ್ಟಿ ಅಳವಡಿಸಿಕೊಳ್ಳಬೇಕಾದ ಅಗತ್ಯವಿದೆ ಎಂದರು. ಬೆಂಗಳೂರಿನ ವಿಭೂತಿಪುರ ಮಠದ ಡಾ|| ಮಹಂತಲಿಂಗ ಶಿವಾಚಾರ್ಯರು ಮಾನಿಹಳ್ಳಿ ಪುರವರ್ಗ ಮಠದ ಮಳೆಯೋಗೀಶ್ವರ ಶಿವಾಚಾರ್ಯರು ಮೈಸೂರು ಜಪದಕಟ್ಟೆ ಮಠದ ಡಾ|| ಮುಮ್ಮಡಿ ಚಂದ್ರಶೇಖರ ಶಿವಾಚಾರ್ಯರು ಮಾತನಾಡಿ ಯುವ ಜನಾಂಗದಲ್ಲಿ ಸಂಸ್ಕಾರ ಸದ್ವಿಚಾರ ಬೆಳೆಸುವ ಅಗತ್ಯ ಇದೆ ಎಂಬುದರ ಬಗೆಗೆ ತಮ್ಮ ನುಡಿ ಸೇವೆ ಸಲ್ಲಿಸಿದರು. ಕೊಟ್ಟೂರು ಚಾನುಕೋಟಿಮಠದ ಡಾ|| ಸಿದ್ಧಲಿಂಗ ಶಿವಾಚಾರ್ಯರು, ಶಕಾಪುರದ ಸಿದ್ಧರಾಮ ಶಿವಾಚಾರ್ಯರು, ಧಾರವಾಡದ ಆರ್.ಜಿ. ಬೇಲೂರಮಠ, ಬೆಳಗಾವಿ ಡಾ|| ಪಿ. ಶಿವರಾಮ ಅವರಿಗೆ ಗೌರವ ಗುರುರಕ್ಷೆ ನೀಡಿ ಸತ್ಕರಿಸಿದರು. ಬಂಕಾಪುರದ ರೇವಣಸಿದ್ಧ ಶಿವಾಚಾರ್ಯರು, ಸುಳ್ಳದ ಶಿವಸಿದ್ಧರಾಮೇಶ್ವರ ಶಿವಾಚಾರ್ಯರು, ಬಿಳಿಕಿ ರಾಚೋಟೇಶ್ವರ ಶಿವಾಚಾರ್ಯರು, ಹರಪನಹಳ್ಳಿ ವರಸದ್ಯೋಜಾತ ಶಿವಾಚಾರ್ಯರು ಸಹಭಾಗಿತ್ವ ವಹಿಸಿದ್ದರು.ನೇ ತೃತ್ವ ವಹಿಸಿದ ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯರು ಮಾತನಾಡಿ ಆಪತ್ಕಾಲದಲ್ಲಿ ನಮ್ಮ ಸದ್ಗುಣಗಳೇ ನಮ್ಮನ್ನು ರಕ್ಷಿಸುತ್ತವೆ. ಜನರೆಲ್ಲರ ಕಣ್ಣುಗಳು ನಮ್ಮ ಮೇಲಿದೆ ಎಂದು ಭಾವಿಸಿ ಬದುಕು ಸಾಗಿಸಬೇಕು. ಯುವಕರಲ್ಲಿ ಗುರುಭಕ್ತಿ ಸ್ವಧರ್ಮ ನಿಷ್ಠೆ ಕ್ರಿಯಾಶೀಲ ಬದುಕು ರೂಪಿತಗೊಳ್ಳಬೇಕಂದರು. ಶಿವಮೊಗ್ಗದ ಕುಮಾರಿ ಜಿ.ಜಿ. ರಕ್ಷಿತಾ ಇವರಿಂದ ಭರತ ನಾಟ್ಯ ಜರುಗಿತು. ಶಿವಮೊಗ್ಗದ ನಾಗರತ್ನ ಚಂದ್ರಶೇಖರಯ್ಯ ಅವರಿಂದ ಸಂಗೀತ ಸೌರಭ ಜರುಗಿತು. ಬೆಂಗಳೂರಿನ ಬೀರೂರು ಶಿವಸ್ವಾಮಿ ಸ್ವಾಗತಿಸಿದರು. ಪ್ರೊ. ಗುರುಪಾದಯ್ಯ ಸಾಲಿಮಠ ನಿರೂಪಿಸಿದರು. ಸಮಾರಂಭದ ನಂತರ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಚಿಕ್ಕ ರಥೋತ್ಸವ ಜರುಗಿತು. ಬೆಳಿಗ್ಗೆ ಶ್ರೀ ವೀರಭದ್ರಸ್ವಾಮಿಗೆ ಗುಗ್ಗುಳ ಸೇವೆ ಜರುಗಿತು. ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ, ಶ್ರೀ ಸೋಮೇಶ್ವರ ಲಿಂಗಕ್ಕೆ ಹಾಗೂ ಕ್ಷೇತ್ರದ ಎಲ್ಲ ದೈವಗಳಿಗೆ ರುದ್ರಭಿಷೇಕ ಬಿಲ್ವಾರ್ಚನೆ ಅಷ್ಟೋತ್ತರ ಮಹಾಪೂಜೆ ಸಂಭ್ರಮದಿಂದ ಜರುಗಿತು.

Share this on WhatsApp Share this on WhatsApp

Read more